FAQ -KANADA

ಸಾಮಾನ್ಯ ಜನತೆಯ (Grassroots), ಸ್ಥಿತಿಸ್ಥಾಪಕತ್ವದ (Resilience), ಮಾಲೀಕತ್ವದ (Ownership) ಹಾಗೂ ಯೋಗಕ್ಷೇಮದ (Wellness) (GROW) ನಿಧಿ ಎಂಬುದು ಜನಸಾಮಾನ್ಯ ಸಂಸ್ಥೆಗಳ ಸಾಮರ್ಥ್ಯಗಳು, ಸ್ಥಿತಿಸ್ಥಾಪಕತೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವಿಕೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ, ಆಮೂಲಕ ಮೂಲಮಟ್ಟದಲ್ಲಿ ಬದಲಾವಣೆಯನ್ನು ತರುವ ಅವುಗಳ ಪ್ರಯತ್ನಗಳನ್ನು ಸುಗಮಗೊಳಿಸುವ, ತನ್ನ ವರ್ಗದಲ್ಲಿಯೇ ಪ್ರಥಮವಾದ ಒಂದು ಉಪಕ್ರಮವಾಗಿದೆ. ಪ್ರತಿಷ್ಠಿತ ನಿಧಿ-ನೀಡುಗರ ಸಮೂಹದ ಜೊತೆಯಲ್ಲಿ ಎಡೆಲ್‌ಗಿವ್‌ ಪ್ರತಿಷ್ಠಾನದ (EdelGive Foundation) ಬೆಂಬಲವನ್ನು ಹೊಂದಿರುವ ಗ್ರೋ ಫಂಡ್‌, ಸಾಮರ್ಥ್ಯ ನಿರ್ಮಾಣ, ಮತ್ತು ಪ್ರಮುಖ ಸಾಂಸ್ಥಿಕ ಕಾರ್ಯಗಳನ್ನು ಬೆಂಬಲಿಸುವ ಮೂಲಕ 24 ತಿಂಗಳುಗಳ ಅವಧಿಯಲ್ಲಿ 100 ಉನ್ನತ ಪ್ರಭಾವದ ಜನಸಾಮಾನ್ಯ ಸಂಸ್ಥೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಕೊವಿಡ್‌ನಿಂದಾಗಿ ಹೊರಿಸಲ್ಪಟ್ಟಿರುವ ಗಂಡಾಂತರವನ್ನು ಹಿಮ್ಮೆಟ್ಟಿಸುತ್ತಾ, ತಾಳಿಕೊಳ್ಳುತ್ತಾ ದೇಶದಾದ್ಯಂತ ಇರುವ ಚಿಕ್ಕ ಮತ್ತು ಮಧ್ಯಮ-ಗಾತ್ರದ ಸಮುದಾಯ-ಆಧರಿತ ಸಂಸ್ಥೆಗಳು. ಅರ್ಹತಾ ಮಾನದಂಡಗಳನ್ನು ಇಲ್ಲಿ ನೀವು ಕಂಡುಕೊಳ್ಳಬಹುದು.

ಮೂಲ ವೆಚ್ಚ, ಸಾಮರ್ಥ್ಯ ನಿರ್ಮಾಣ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವಿಕೆ.

ಪ್ರತಿ ವರ್ಷಕ್ಕೆ ಪ್ರತಿ ಸಂಸ್ಥೆಗೆ ರೂ. 40 ಲಕ್ಷಗಳು.

ಇಲ್ಲ. Eligibility Criteria ಅರ್ಹತಾ ಮಾನದಂಡಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು, ಭಾರತದಾದ್ಯಂತದ ಎಲ್ಲ ಜನಸಾಮಾನ್ಯ ಸಂಸ್ಥೆಗಳು ಈ ಫಂಡ್‌ಗಾಗಿ ಅರ್ಜಿ ಸಲ್ಲಿಸಬಹುದು

  • ಇಲ್ಲ, ಅರ್ಜಿಗಳನ್ನು ಅಧೀಕೃತ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಸಲ್ಲಿಸಬಹುದು.
  • ಮುಂದುವರೆದು, ತಮ್ಮ ಪರವಾಗಿ ಅರ್ಜಿಗಳನ್ನು ಸ್ವೀಕರಿಸಲು ಯಾವುದೇ ವ್ಯಕ್ತಿ, ಏಜನ್ಸಿ ಅಥವಾ ಸಂಸ್ಥೆಗೆ ಎಡೆಲ್‌ಗಿವ್‌ ಪ್ರತಿಷ್ಠಾನ ಮತ್ತು ಗ್ರೋ ಫಂಡ್ ಅಧಿಕಾರವನ್ನು ನೀಡಿರುವುದಿಲ್ಲ.

ಈ ನಿಧಿಯನ್ನು ಭಾರತದಲ್ಲಿ ನೋಂದಾಯಿಸಿದ ಲಾಭಕ್ಕಲ್ಲದ ಸಂಸ್ಥೆಗಳಿಗೆ ಮಾತ್ರ ಒದಗಿಸಲಾಗುತ್ತದೆ.

ಇಲ್ಲ. ಒಂದು ಸಂಸ್ಥೆಯು 1 ಅರ್ಜಿಯನ್ನು ಮಾತ್ರ ಸಲ್ಲಿಸಬಹುದು.

ಎರಡು ಕಂತುಗಳಲ್ಲಿ ವಿಭಾಗಿಸಲ್ಪಟ್ಟ 24 ತಿಂಗಳುಗಳು.

ಎರಡು ವರ್ಗದ ದಾಖಲೆಗಳಿವೆ. ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಒಂದು ಕಟ್ಟು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಿರುತ್ತದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೂ ಮೊದಲು ಇನ್ನೊಂದು ಕಟ್ಟು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಿರುತ್ತದೆ.

ಇಲ್ಲ. ನಿಮ್ಮ ಅರ್ಜಿಯನ್ನು ಒಂದು ಬಾರಿ ಸಲ್ಲಿಸಿದ ನಂತರ, ಯಾವುದೇ ಬದಲಾವಣೆಗಳನ್ನು ಮಾಡುವುದು ಸಾಧ್ಯವಿರುವುದಿಲ್ಲ. ಸಲ್ಲಿಸುವ ಮೊದಲೇ ನಿಮ್ಮ ಅರ್ಜಿಯನ್ನು ಜಾಗರೂಕತೆಯಿಂದ ಪುನರಾವಲೋಕಿಸಿ.

ಹೌದು, ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಒಂದು ಪಿಡಿಎಫ್‌ ಜನರೇಟ್‌ ಆಗುತ್ತದೆ, ಅದನ್ನು ನಿಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ನೀವು ಸೇವ್‌ ಮಾಡಿಕೊಳ್ಳಬಹುದು.

ಅರ್ಜಿಯನ್ನು ಸಲ್ಲಿಸಿದ ನಂತರ, ನೋಂದಾಯಿತ ಇ-ಮೇಲ್‌ ವಿಳಾಸಕ್ಕೆ ಒಂದು ಧೃಢೀಕರಣ/ಸ್ವೀಕೃತಿ ಇ-ಮೇಲ್‌ ಅನ್ನು ಕಳುಹಿಸಲಾಗುತ್ತದೆ. ಸಲ್ಲಿಸಿದ ನಂತರದ 24 ಗಂಟೆಗಳೊಳಗೆ ಈ ಇ-ಮೇಲ್‌ ನಿಮಗೆ ಬರದಿದ್ದಲ್ಲಿ, ದಯವಿಟ್ಟು [email protected] ಗೆ ಬರೆದು ತಿಳಿಸಿ.

ಇಲ್ಲ. ಈ ಫಂಡ್‌, ವೆಬ್‌ಸೈಟ್‌ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಅಂಗೀಕರಿಸುತ್ತದೆ.

ಅರ್ಜಿಯನ್ನು ಇಂಗ್ಲೀಷ್‌ ಭಾಷೆಯಲ್ಲಿ ಮಾತ್ರ ಸಲ್ಲಿಸಬಹುದು. ಆದರೆ, ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿವೆ.

ನಿಮ್ಮ ಸಂಸ್ಥೆಯಿಂದ ಯಾರೋ ಒಬ್ಬರು ಈಗಾಗಲೇ ನೋಂದಾಯಿಸಿದ್ದಾರೆ/ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಇದು ಅರ್ಥೈಸುತ್ತದೆ. ಈ ಸಂಬಂಧವಾಗಿ ಯಾವುದೇ ನೆರವು ಬೇಕಾದಲ್ಲಿ, ದಯವಿಟ್ಟು +91 7669300295 ಈ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿ ಅಥವಾ [email protected] ಇಲ್ಲಿಗೆ ಬರೆದು ನಮಗೆ ತಿಳಿಸಿ.

Scroll to Top